ಫೆ. 27 ರಿಂದ ಶ್ರೀಮಾತಾ ಸಂಸ್ಕೃತ ವಿದ್ಯಾಲಯದ ಎನ್ಎಸ್ಎಸ್ ಶಿಬಿರ

ಯಲ್ಲಾಪುರ: ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜು ಕೋಟೇಮನೆ ಉಮ್ಮಚಗಿ ಇದರ ಎನ್ಎಸ್ಎಸ್ ಘಟಕದಿಂದ ಫೆ. 27  ರಿಂದ ಮಾ. 05 ರವರೆಗೆ ರಾ.ಸೇ.ಯೋ ವಾರ್ಷಿಕ ವಿಶೇಷ ಶಿಬಿರವು ಸೋಂದಾ ಗ್ರಾಮದ ಯಾತ್ರಿನಿವಾಸದಲ್ಲಿ ಆಯೋಜಿಸಲ್ಪಟ್ಟಿದೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ನಿರ್ದೇಶನದಂತೆ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ, ಗ್ರಾಮಾಭಿವೃದ್ಧಿಗೆ ಸಹಾಯಕವಾದ, ರಾಷ್ಟ್ರಭಕ್ತಿ ಮತ್ತು ರಾಷ್ಟಸೇವೆಗೆ ಪ್ರತೀಕವಾದ ರಾ.ಸೇ.ಯೋ. ಘಟಕವು   ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜು ಕೋಟೇಮನೆ ಉಮ್ಮಚಗಿ ಇಲ್ಲಿ ಪ್ರಾರಂಭವಾಗಿ  3 ವರ್ಷಗಳನ್ನು ಸಮರ್ಥವಾಗಿ ಕಳೆದಿದ್ದು ರಾ.ಸೇ.ಯೋ. ಘಟಕದಿಂದ ರಕ್ತದಾನ ಶಿಬಿರ ವಿಚಾರಗೋಷ್ಠೀ, ಸ್ವಚ್ಛತಾ ಆಂದೋಲನ , ಶ್ರಮದಾನ, ಕ್ರೀಡೆಗಳು ಹೀಗೆ ವಿವಿಧ ಕಾರ್ಯಕ್ರಗಳು ನಡೆಸಲ್ಪಟ್ಟಿವೆ. ಸ್ವಯಂಸೇವಕ ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಮಟ್ಟದ ಹಾಗೂ ರಾಜ್ಯಮಟ್ಟದ ಶಿಬಿರಗಳಲ್ಲಿ ಭಾಗವಹಿಸಿರುತ್ತಾರೆ. ಈ ಘಟಕದಿಂದ  ಈ ಕಾರ್ಯಕ್ರಮವನ್ನು 27 ರಂದು ಮಧ್ಯಾಹ್ನ 3.30 ಕ್ಕೆ ಶ್ರೀ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಸ್ವರ್ಣವಲ್ಲೀ  ಇವರು ಉದ್ಘಾಟಿಸುವರು. ಅಭ್ಯಾಗತಾರಾಗಿ ಶಾಸಕ ಶಿವರಾಮ ಹೆಬ್ಬಾರ , ಜಿ.ಪಂ ಅಧ್ಯಕ್ಷೆ ಶ್ರೀಮತೀ ಜಯಶ್ರೀ ಮೊಗೇರ, ಯಲ್ಲಾಪುರ ತಾ.ಪಂ. ಅಧ್ಯಕ್ಷರಾದ ಶ್ರೀಮತಿ ಭವ್ಯಾ ಎಸ್ ಶೆಟ್ಟಿ, ಉಮ್ಮಚಗಿ ಗ್ರಾ.ಪಂ. ಅಧ್ಯಕ್ಷರಾದ ಗ. ರಾ. ಭಟ್ಟ , ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಅಧ್ಯಕ್ಷರ ಪ್ರಮೋದ ಹೆಗಡೆ , ಕ.ಸಂ.ವಿ.ಬೆಂಗಳೂರು ಇಲ್ಲಿ ರಾ.ಸೇ.ಯೋ. ಸಂಯೋಜನಾಧಿಕಾರಿಗಳಾದ ಡಾ|| ಸಂತೋಷ ಹಾನಗಲ್, ರಾಜ್ಯ ಪ್ರಶಸ್ತಿ ವಿಜೇತ ರಾ.ಸೇ.ಯೋ ಕಾರ್ಯಕ್ರಮಾಧಿಕಾರಿಗಳಾದ ಬೀರಣ್ಣ ನಾಯಕ ಮೊಗಟಾ, ಶ್ರೀ ಶ್ರೀಮಾತಾ ಸಂಸ್ಕøತ ವೈದಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ತಿಮ್ಮಪ್ಪ ವಿ ಹೆಗಡೆ ಬೆದೆಹಕ್ಕಲು, ಶ್ರೀ ಶ್ರೀಮಾತಾ ಸಂಸ್ಕೃತ ಕಾಲೇಜಿನ ಪ್ರಾಚಾರ್ಯರಾದ ವಿದ್ವಾನ್ ರಾಮಚಂದ್ರ ಭಟ್ಟ ಉಮ್ಮಚಗಿ, ಕ.ಸಂ.ಕಾ.ಬೋಧಕ ಮತ್ತು ಬೋಧಕೇತರ ಸಂಘದ ಅಧ್ಯಕ್ಷರಾದ ಡಾ|| ನಾಗೇಂದ್ರ ಇವರುಗಳು ಪಾಲ್ಗೊಳ್ಳಲಿದ್ದಾರೆ.ಪ್ರತಿದಿನ ಬೆಳಿಗ್ಗೆ 9 ಘಂಟೆಯಿಂದ  ಶ್ರಮದಾನ ಮಧ್ಯಾಹ್ನ 3 ಘಂಟೆಯಿಂದ  ಉಪನ್ಯಾಸ ಸಂಜೆ 7 ಘಂಟೆಯಿಂದ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವವು. 

ದಿನಾಂಕ 28 ರಂದು ಡಾ|| ಶಿವಯೋಗೀ ಹಂಚಿನಮನೆ ಇವರಿಂದ ನಗದುರಹಿತ ವ್ಯವಹಾರ ಎಂಬ ವಿಷಯದಲ್ಲಿ 1 ರಂದು ಪಂಡಿತ ಡಾ|| ವೇಂಕಟನರಸಿಂಹಾಚಾರ್ಯ ಜೋಶೀ ಇವರಿಂದ ಮಾನವೀಯ ಮೌಲ್ಯಗಳ ಆಕರ ಭಾರತೀಯ ಸಂಸ್ಕೃತಿ ಎಂಬ ವಿಷಯದಲ್ಲಿ 2 ರಂದು ಡಾ|| ಜಿ.ವಿ.ಹೆಗಡೆಹುಳಗೋಳ ಇವರಿಂದ ಕೃಷಿಕನಿಗೆ ಬೇಕಾದ ಸಾಮಾನ್ಯ ತಿಳುವಳಿಕೆಗಳು ಎಂಬ  ವಿಷಯದಲ್ಲಿ 3 ರಂದು ವಿದ್ವಾನ್ ಉಮಾಕಾಂತ ಭಟ್ಟ ಇವರಿಂದ ಕಾವ್ಯಾಸ್ವಾದ ಎಂಬ  ವಿಷಯದಲ್ಲಿ 4 ರಂದು ವಕೀಲರಾದ  ಅರುಣಾಚಲ ಪಿ. ಹೆಗಡೆ ಇವರಿಂದ ದೈನಂದಿನ ಜೀವನದಲ್ಲಿ ಕಾನೂನು ಎಂಬ ವಿಷಯದಲ್ಲಿ ಉಪನ್ಯಾಸ ನಡೆಯುವುದು.

ದಿನಾಂಕ 28 ರಂದು ವಿದ್ವಾನ್ ಶಂಕರ ಭಟ್ಟ ಉಂಚಳ್ಳಿ ಇವರಿಂದ ಹರಿಕೀರ್ತನೆ 1 ರಂದು ಆಕಾಶವಾಣಿ ಕಲಾವಿದರಾದ ಶೇಖ್ ಅಬ್ದುಲ್ಲಾ ಖಾಜೀ ಇವರಿಂದ ಕೊಳಲು ವಾದನ ದತ್ತಾತ್ರೇಯ ದೇವರು ಭಡಾರೀ ಇವರಿಂದ ಶಹನಾಯೀ ವಾದನ ಇವರಿಗೆ  ತಬಲಾ ಸಾಥ್ ವಿದ್ವಾನ್ ರವಿ ಜೋಶೀ ಧಾರವಾಡ 2 ರಂದು ವಿದ್ವಾನ್ ಗಣೇಶ ಭಟ್ಟ ನೆರ್ಲೆಮನೆ ಹಾಗೂ ತಂಡದವರಿದ ಸಂಗೀತ ಸೌರಭ 3 ರಂದು ರಂಗಭೋಮಿ,ಕಿರುತೆರೆ ಹಾಗೂ ಚಲನಚಿತ್ರ ನಟರಾದ ಅನಂತ ಕೆ ದೇಶಪಾಂಡೆ ಇವರಿಂದ ಬೇಂದ್ರೆ ದರ್ಶನವೆಂಬ ವಿಶೇಷ ಕಾರ್ಯಕ್ರಮ (ಬೇಂದ್ರೆಯವರ ಜೀವನ ಚಿತ್ರಣ) ಶ್ರೀಕೃಷ್ಣ ಭಾಗ್ವತ್ ಕಂಚನಹಳ್ಳಿ ಹಾಗೂ ಮೈತ್ರೇಯೀ ನೃತ್ಯ ಕಲಾ ಟ್ರಸ್ಟ ಗೋಕರ್ಣ ಇವರಿಂದ ಭರತನಾಟ್ಯ 4 ರಂದು ವಾಲೀವಧೆ ತಾಳಮದ್ದಲೆ ಕಾರ್ಯಕ್ರಮ ಭಾಗವತರಾಗಿ ವಿದ್ವಾನ್ ಗಣಪತಿ ಭಟ್ಟ ಮೊಟ್ಟೆಗದ್ದೆ. ಮೃದಂಗವಾದಕರಾಗಿ ನರಸಿಂಹ ಭಟ್ಟ ಹಂಡ್ರಮನೆ ಮುಮ್ಮೇಳದಲ್ಲಿ ವಿದ್ವಾನ್ ಉಮಾಕಾಂತ ಭಟ್ಟ, ಎಮ್,ಎನ್. ಹೆಗಡೆ ಹಳವಳ್ಳಿ, ವಿದ್ವಾನ್ ಗಣಪತಿ ಭಟ್ಟ ಸಂಕದಗುಂಡಿ, ವಿದ್ವಾನ್ ಮಂಜುನಾಥ ರಾ ಭಟ್ಟ ಬೆಂಗಳೂರು ಭಾಗವಹಿಸುವರು. 

ಮಾ. 05 ರಂದು ಬೆಳಿಗ್ಗೆ  9 ಘಂಟೆಗೆ ಸಂಸ್ಕೃತ ಪ್ರಚಾರ ಹಾಗೂ ಸ್ವಚ್ಛತಾ ಜಾಗ್ರತಿ ಕಾರ್ಯಕ್ರಮ ನಡೆಯುವುದು. ಮಧ್ಯಾಹ್ನ  3 ಘಂಟೆಯಿಂದ ನಡೆಯುವ ಸಮಾರೋಪಕಾರ್ಯಕ್ರಮದಲ್ಲಿ  ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಶಿರಸಿ ತಾ. ಪಂ. ಅಧ್ಯಕ್ಷೆ ಶ್ರೀಮತಿ ಶ್ರೀಲತಾ ಕಾಳೇರಮನೆ, ಸೋಂದಾ ಗ್ರಾ. ಪಂ. ಅಧ್ಯಕ್ಷ ಮಂಜುನಾಥ ಭಂಡಾರಿ, ಬೈರುಂಭೆ ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಜಯಾ ಶೇಖರ ನಾಯ್ಕ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಉಪಾಧ್ಯಕ್ಷರಾದ ವಿ.ಎನ್.ಹೆಗಡೆ ,  ಶ್ರೀ ರಾ.ರಾ. ಸಂಸ್ಕೃತ ಮಹಾವಿದ್ಯಾಲಯದ ಪ್ರಾಚಾರ್ಯರಾದ ವಿದ್ವಾನ್ ನರಸಿಂಹ ಭಟ್ಟ  , ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ    ಪ್ರೋ. ಜಿ.ಟಿ.ಭಟ್ಟ  ಇವರು ಪಾಲ್ಗೊಳ್ಳುವರು. ಶ್ರೀ ಶ್ರೀಮಾತಾ ಸಂಸ್ಕೃತ ವೈದಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ತಿಮ್ಮಪ್ಪ ವಿ ಹೆಗಡೆ ಬೆದೆಹಕ್ಕಲು ಇವರು ಸಭಾಧ್ಯಕ್ಷತೆಯನ್ನು ವಹಿಸುವರು.

Leave a comment